Friday 23 August 2013

ಪ್ರಿಯ ಸಹೋದರಿ.., ಮಿಶೆಲಾ ಕ್ರಾಸ್

ನೀವು ನಮ್ಮ ಪವಿತ್ರ ಭಾರತದಲ್ಲಿ ಇದ್ದ ಅಷ್ಟೂ ದಿನಗಳು ಅನುಭವಿಸಿರುವ ಯಾತನೆಗೆ ನಮ್ಮ ಅನುಕಂಪವಿದೆ ,ವಿಷಾದವಿದೆ ಮತ್ತು ನಿಮ್ಮ ನೋವಿಗೆ ಕಾರಣವಾದ ಸಂಗತಿಗಳು ಮತ್ತು ಮನುಜರ ಬಗ್ಗೆ ನಮ್ಮೆಲ್ಲರ ದಿಕ್ಕಾರವಿದೆ .ಆದರೇ ಸೋದರೀ ...ಈ ನಮ್ಮ ಪವಿತ್ರ ವಿಶಾಲ ಭಾರತದಲ್ಲಿ ದುರದೃಷ್ಟವಶಾತ್
 ನಿಮಗೆ ಕಾಣಲು ಸಿಗದೇ ಹೋದ ಅಸಂಖ್ಯಾತ ಮಾನವೀಯ ಮನಸ್ಸುಗಳಿವೆ ,ಸಮಾಜವಿದೆ,ಸಂಸ್ಕೃತಿಯಿದೆ ,ಹೆಣ್ಣನ್ನು ಗೌರವಪೂರ್ವಕವಾಗಿ ನಡೆಸಿಕೊಳ್ಳುವ ಸಂಸ್ಕಾರ ಭರಿತ ಕೋಟಿ ಕೋಟಿ ಕುಟುಂಬಗಳಿವೆ,ನೀವು ಇಲ್ಲಿ ಇದ್ದ ಅಷ್ಟೂ ದಿನ ನಿಮ್ಮ ಅನುಭವಕ್ಕೆ ಅವ್ಯಾವೂ ಬರದೇ ಹೋಗಿದ್ದು ಮೊದಲು ನಿಮ್ಮ ದೌರ್ಭಾಗ್ಯ ನಂತರ ನಮ್ಮ ದೌರ್ಭಾಗ್ಯವೂ ...ಹೌದು. ಸೋದರಿ ,ನೋವನ್ನು ಕಾರಿಕೊಳ್ಳುವ ಭರದಲ್ಲಿ ಭಾರತ ದೇಶವೇ ಹೀಗೆ ಎಂಬ ಸಾರ್ವತ್ರಿಕ ಅನಿಸಿಕೆ ಬರುವಂತೆ ಬರೆದು ಬಿಟ್ಟಿದ್ದೀರಲ್ಲ ಇದು ಸರಿಯೇ ? ನೀವು ನಿಮ್ಮನ್ನು ನೋಡಿದ ಕಣ್ಣುಗಳ ಬಗ್ಗೆ ಹೇಳಿದ್ದೀರ ..ಹೌದು ಮುಜುಗರದ ವಿಷಯವೇ ಸರಿ. ಆದರೇ ಸೋದರಿ ,ಭಾರತ ದೇಶದ ಮಹಿಳೆಯರನ್ನು ಶತಮಾನಗಳ ವರೆಗೆ ಬ್ರಿಟೀಷರು ,ಮೊಗಲರು ದೈಹಿಕವಾಗಿ ..ಮಾನಸಿಕವಾಗಿ ಕಾಡಿದ – ಬಲಾತ್ಕರಿಸಿದ – ಹಿಂಸಿಸಿದ ಇತಿಹಾಸ ನಿಮಗೆ ತಿಳಿದಿದೆಯೇ ? ಖಂಡಿತವಾಗಿಯೂ ಅಲ್ಲಿಗಲ್ಲಿಗೆ ಸರಿಹೋಯ್ತು ಎನ್ನುವ ನಪುಂಸಕ ವಾದಕ್ಕೆ ನಾನು ಇಳಿದಿಲ್ಲ ..ನೀವು ಹೇಳಿಕೊಂಡಿರುವ ಎಲ್ಲವನ್ನೂ ನಾವುಗಳೂ ಪರಕೀಯರಿಂದಲೇ ಇನ್ನೂ ಹೆಚ್ಚಾಗೆ ಅನುಭವಿಸಿದ್ದೇವೆ ಹಾಗಾಗಿ ಅತಿಥಿಗಳನ್ನು ಗೌರವಾದರಗಳಿಂದ ಸತ್ಕರಿಸುವ ಸಂಸ್ಕಾರ ನಮಗೆ ಸಂಸ್ಕೃತಿಯ ಅವಿಭಾಜ್ಯ ಅಂಗವೇ ಆಗಿದೆ ಎಂದು ತಿಳಿಸ ಬಯಸಿದೆ ಅಷ್ಟೆ. 

 ಇದನ್ನು ಬರೆಯುತ್ತಿರುವಾಗಲೇ ಟಿ.ವಿ ಯಲ್ಲಿ ನಮ್ಮದೇ ದೇಶದ ಹುಡುಗಿಯೊಬ್ಬಳನ್ನು ನಮ್ಮದೇ ನಾಡಿನ ಐವರು ಕಾಮುಕರು ಮುಂಬೈನಲ್ಲಿ ಅತ್ಯಾಚಾರಗೈದ ಸುದ್ದಿಯೂ ಬರುತಿದೆ !! ಅರ್ಥ ಮಾಡಿಕೊಳ್ಳಿ ಸೋದರಿ , ಕಾಮುಕ ದೃಷ್ಟಿಯುಳ್ಳವರಿಗೆ , ಸ್ತ್ರೀ ಪೀಡಕರಿಗೆ ,ಅತ್ಯಾಚಾರಿಗಳಿಗೆ ದೇಶ – ಪರದೇಶ – ಸ್ಥಳೀಯ – ಪರಕೀಯ –ಬಿಳಿ ತೊಗಲು  – ಕಪ್ಪು ಕೂದಲು ಎಂಬ ವ್ಯತ್ಯಾಸ ,ವ್ಯಾಪ್ತಿ ಇರುವುದಿಲ್ಲ !! ಅವರು ನಮ್ಮಲ್ಲೂ ಇದ್ದಾರೆ ..ಅಷ್ಟೇ ಸತ್ಯವಾಗಿ ನಿಮ್ಮಲ್ಲೂ ಇದ್ದಾರೆ .
ಅಂಥವರಿಗೆ ನಾವಿಬ್ಬರೂ ಒಟ್ಟಾಗಿ ದಿಕ್ಕಾರ ಕೂಗೋಣ ಗಲ್ಲಿಗೇರಿಸಲು ಆಗ್ರಹಿಸೋಣ. ದೌರ್ಬಲ್ಯಗಳು ವ್ಯಕ್ತಿಯಲ್ಲಿರುವುದು ಅದಕ್ಕೆ ಜಾತಿ –ಧರ್ಮ ..ದೇಶವನ್ನಾಗಲಿ ಬೆರೆಸಿ ಬರೆಯುವುದು ತಪ್ಪಲ್ಲವೇ ?? ನನ್ನ ದೇಶದಲ್ಲಿ ಹೀಗೆಂದು ಆಗಿಲ್ಲ ಹಾಗೆಂದು ಆಗಿಲ್ಲ ಎಂದು ಬರೆದುಕೊಂಡಿದ್ದೀರ ಕೆಲವು ಪ್ರಶ್ನೆಗಳೊಂದಿಗೆ ಈ ಸಂವಾದ ಮುಗಿಸುತಿದ್ದೇನೆ .

1)
ಪ್ರಪಂಚಕ್ಕೆ ಪಾರ್ನ್ ಫಿಲಂ - ಬ್ಲೂ ಫಿಲ್ಮ್ ( ನೀಲಿ ಚಿತ್ರ ) ಗಳನ್ನು ಪರಿಚಿಯಿಸಿದ ರಾಷ್ಟ್ರವಾದರೂ ಯಾವುದು ?
2)ನಾನು ಪಾರ್ನ್ ಫಿಲಂ ಮೇಕರ್  ಎಂದು ವಿಸಿಟಿಂಗ್ ಕಾರ್ಡ್ ಕೊಟ್ಟು ಪರಿಚಯಿಸಿಕೊಳ್ಳುವ ವ್ಯಕ್ತಿಗಳು ಇರುವುದಾದರೂ ಎಲ್ಲಿ ?
3)ಲಾಸ್ವೆಗಾಸ್ ನಲ್ಲಿ ನಿಮಿಷಕೊಮ್ಮೆ ಎಷ್ಟು ಕೊಲೆ ನಡೆಯುತ್ತದೆ ಮತ್ತು ಯಾವ್ಯಾವ ಕಾರಣಕ್ಕಾಗಿ ?

 
ದಯಮಾಡಿ ಮತ್ತೊಮ್ಮೆ ಭಾರತಕ್ಕೆ ಬಾ ಸಹೋದರಿ ನಿಮಗೆ ಸಂಸ್ಕಾರಯುತ ಪವಿತ್ರ ಭಾರತ ಪರಿಚಯಿಸಲು ನಾವಿದ್ದೇವೆ

ಪೋಟೋ ಮತ್ತು ವಿಷಯ ಕೃಪೆ : ಉದಯವಾಣಿ ಕನ್ನಡ ದಿನ ಪತ್ರಿಕೆ