ಮುಷ್ಠಿ
ಬಿಡಿಸಲಾಗದ ಕೂಸು ಕಾಲವದು
ಸಮಷ್ಠಿಗೆ
ಬೆರಗುಗಣ್ಣು ಬಿಟ್ಟ ವಯಸದು
ಕಂಡದ್ದೆಲ್ಲ
ಪಡೆಯಲು ತೆವಳಿದ ನಡಿಗೆಯದು
ನಿದ್ದೆಯಿಂದೆದ್ದಾಗಲೆಲ್ಲಾ
...ಎದೆಗವಚಿ
ಕಂದಾ
ಎಂದು ಕನವರಿಸದಿದ್ದರೆ
ಕಳ್ಳ
ಬೆಕ್ಕು ಪುಟ್ಟ ರೊಟ್ಟಿ ಕದ್ದೊಡಿದರೆ
ಗುಬ್ಬಿ
ಕೈಗೆ ಸಿಗದೆ ರೊಯ್ಯನೆ ಹಾರಿದರೆ
ನೆರವಾಗಿ ಬರುವ ಸ್ವರ " ಅಳು " ವೊಂದೇ
ಬೇಕು
ಬೇಡದ ಭಾಷೆ ಒಂದೇ ಅಳುವಲ್ಲಿ
ಹಲವು
ಭಾವಾರ್ಥ ಕಂಡುಕೊಂಡವಳು
ಅಮೃತ
ಉಣಿಸಿ ಹಸಿವ ನಂದಿಸಿದವಳು
ಪ್ರೀತಿ
ತುತ್ತಿಕ್ಕಿ ಮಮತೆ ಮುತ್ತಿಕ್ಕಿದವಳು
ಮಡಿಲ
ನೀಡಿ ಮುದ್ದು ಮಾಡಿ ಮಾತೆಯಾದಳು
"
ಅಮ್ಮಾ " ಎರಡಕ್ಷರ ಕೋಟಿ ಬಾರಿ ಕರೆದರೂ
"ವರ್ಷಕ್ಕೆ" ದಿನವೊಂದು ಮುಡಿಪಾಗಿಟ್ಟರೂ
"ಜನುಮ"
ಹಲವು ಮತ್ತೆ ಮತ್ತೆ ಬಂದರೂ
ತೀರದು
ಪ್ರತಿ ಜನುಮಕು ಪ್ರೀತಿ ವರವಾದ
ಪೊರೆವ ಪರಿಯಾದ ಜನುಮಧಾತೆಯ "ಋಣವು" ಚಿತ್ರಗಳು - ಕೃಪೆ : ಗೂಗಲ್ ಇಮೇಜಸ್
sooper sir..........
ReplyDeleteThis comment has been removed by the author.
DeleteThanks. ......
Delete