Thursday 23 May 2013

ಮದುವೆ - ವಿಧವೆ


ಹುಡುಗಿಯೊಬ್ಬಳು..,

ಮದುವೆಗೆ ಮುಂಚೆಯೇ ವಿಧವೆಯಾಗಿ
ಮತ್ತೆ ಮದುವೆಯಾದಳಂತೆ !!

ಏಳೂರು ಸುತ್ತಾಡಿ ತಲೆಮಾರು ಹುಡುಕಾಡಿ

ಬಸವಳಿದು ಹುಸ್ಸೆಂದ ಹುಡುಗಿಯ ತಂದೆ
ಫಲ ಸಿಗದು ಛಲ ಬಿಡೆನು ಅಂದ
ಅದು ದಲ್ಲಾಳಿಯ ದಂಧೆ!!

ಮಾಂಗಲ್ಯ ತಂತು ಅವ್ನೇನಾ..ನೀನೇನಾ
ಅಕ್ಕನ ಬಿಟ್ಟು ತಂಗಿ ಮದುವೆ ಮಾಡೋಣ
ಮುಷ್ಠಿ ಬಿಗಿ ಹಿಡಿದು ಮನಸ್ಸು ಗಟ್ಟಿಯಾಗುವುದರಲ್ಲಿ
ಕಂಕಣ ಭಾಗ್ಯ ...ಕೂಡಿ ಬಂತು !!



ವರ ಚಂದಿರನೇ ವದನದಲ್ಲಿ ಹಳ್ಳಗಳು

ಚಿಂತೆ ಬೇಡ ನಾದಿನಿಯಿಲ್ಲದ ಮನೆಯು
ಮುಳ್ಳಿರದ ಗುಲಾಬಿ ಹೂ ತೋಟವದು 
ತವರ ಮರೆವಷ್ಟು ವೈಭವದ ಶ್ರೀಮಂತಿಕೆಯು!!


ಅವರೂ ಬಂದು ಮುಂದುವರೆದರು
ಮಾತು ಕಥೆ-ಹುಡುಗಿಗೆನೋ ವ್ಯಥೆ
ವರ ಅಪ್ಪಟ ಚಂದಿರನಂತೆ
ಅಯ್ಯೋ ..ಮಣ್ಣಲ್ಲಿ ಚಿನ್ನ ಬೆರೆತಂತೆ!!

ಹೊತ್ತು ಹೆತ್ತವರು -ಸನಿಹದವರು
ಧಾರೆಯೆರೆದು ಭಾರ ಇಳಿಸಿಕೊಳ್ಳಬೇಕಾದವರು
ಲಗ್ನಕ್ಕೆ ಆಜ್ಞೆಯಂತೆ ಕೊನೆಮಾತು ಆಡಿಯೇ ಬಿಟ್ಟರು
ನಾಳೆ ಏನೇ ಆದರೂ ಕಟ್ಟಿ ಕೊಂಡವಳಿಗೆ ಕಷ್ಟವೇನಿಲ್ಲ !!


ಕೊನೇ ಮಾತು ತಾಳಿ ಕಟ್ಟಿದವನು ತೀರಿ ಕೊಂಡರೂ..
ಚಿಂತಿಸಿದಳು ಕಂತು ಕಂತಲ್ಲಿ ಕಲ್ಪಿಸಿಕೊಂಡಳು

ವಿವಾಹವಾಗಿ ವೈಧವ್ಯದ ಭ್ರಮೆ ಆವರಿಸಿದರೂ
ಸಿರಿವಂತಿಕೆಯ ಸಿಂಧೂರ ಮನೆ ತುಂಬಾ ಮೆರದಾಡಿತು!!


ಮಾರನೇ ದಿನವೇ  ಮುತೈದೆ ಮಂಗಳವಾರ
ಮಲ್ಲಿಗೆ ಹೂ ಮುಡಿದು ನುಡಿದಳು ಹುಡುಗಿ
ಚಪ್ಪರದಂದೆ ಓಲಗದವರ ಕರೆಸಿ ಊದಿಸಿ
ಫಲಿಸಿತು ಎನ್ನಯ ಪೂಜಾ ಫಲ ......!!



ಹುಡುಗಿಯೊಬ್ಬಳು..,
ಮದುವೆಗೆ ಮುಂಚೆಯೇ ವಿಧವೆಯಾಗಿ
ಮತ್ತೆ ಮದುವೆಯಾದಳಂತೆ !!



ಚಿತ್ರ ಕೃಪೆ : ಗೂಗಲ್ ಇಮೇಜಸ್ 

2 comments:

  1. Maduvege munche hege vidhaveyadalu annodu sariyagi artha aglilla..

    ReplyDelete
    Replies
    1. ಹೊತ್ತು ಹೆತ್ತವರು -ಸನಿಹದವರು
      ಧಾರೆಯೆರೆದು ಭಾರ ಇಳಿಸಿಕೊಳ್ಳಬೇಕಾದವರು
      ಲಗ್ನಕ್ಕೆ ಆಜ್ಞೆಯಂತೆ ಕೊನೆಮಾತು ಆಡಿಯೇ ಬಿಟ್ಟರು
      ನಾಳೆ ಏನೇ ಆದರೂ ಕಟ್ಟಿ ಕೊಂಡವಳಿಗೆ ಕಷ್ಟವೇನಿಲ್ಲ !!

      ಕೊನೇ ಮಾತು ತಾಳಿ ಕಟ್ಟಿದವನು ತೀರಿ ಕೊಂಡರೂ..
      ಚಿಂತಿಸಿದಳು ಕಂತು ಕಂತಲ್ಲಿ ಕಲ್ಪಿಸಿಕೊಂಡಳು
      ವಿವಾಹವಾಗಿ ವೈಧವ್ಯದ ಭ್ರಮೆ ಆವರಿಸಿದರೂ
      ಸಿರಿವಂತಿಕೆಯ ಸಿಂಧೂರ ಮನೆ ತುಂಬಾ ಮೆರದಾಡಿತು!!

      " ಲಗ್ನ ನಿಶ್ಚಯಕ್ಕೆ ಮುಂಚ್ಚೆ ಹುಡುಗನ ಮನೆಯ ಆಸ್ತಿಪಾಸ್ತಿ ನೋಡಿ ಹಿರಿಯರು - ನೋಡಮ್ಮ ನಾಳೆ ಹೆಚ್ಚು ಕಮ್ಮಿ ಆದ್ರೆ ಜೀವನಕಂತೂ ತೊಂದ್ರೆ ಇಲ್ಲ !!ಎನ್ನುವುದು ವಾಡಿಕೆಯ ಮಾತು.ಅದರರ್ಥ ತಾಳಿ ಕಟ್ಟುವವನು ತೀರಿಕೊಂಡರು ಎಂದೇ ತಾನೇ ,ಅದನ್ನು ಕಲ್ಪಿಸಿಕೊಂಡು ಅರೆ ಕ್ಷಣ ವಿಧವೆಯಾಗಿ,ನಂತರ ಸಿರಿವಂತಿಕೆಯ ಕಂಡು ಮದುವೆಗೆ ಒಪ್ಪಿಕೊಂಡಳು!!

      Delete