Thursday 10 July 2014

ಶ್ರಾವಣ ಸಂಜೆ .....

ಒಂದು ಸುಂದರ ಶ್ರಾವಣ ಸಂಜೆ
ನನ್ನದಾಗಲಿ ..ನಿನ್ನದಾಗಲಿ
ತನುಮನದ ಬೆಸುಗೆ ಮಳೆಗೆ
ಹೊಸಭಾವ ಬೆಳೆ ತೆನೆಯಾಗಲಿ .

ಗಂಟ್ಟಿಕ್ಕಿದ ಹುಬ್ಬು ಆಚೀಚೆ ಸರಿದು
ಬಿಸಿಉಸಿರ ಬಿಟ್ಟು ಬಿಟ್ಟೂ ಹಿಡಿದು
ನಯನನೇತ್ರದೊಳು ಸರಸ ಸಂಚಾರ
ಕುಳಿಗಲ್ಲ ಅರಳಿ ಅಧರ ಮಧು ಪಾತ್ರ


ನಾನು ನೀನೇನುತಿದ್ದ ತೋರ್ ಬೆರಳು
ಪ್ರಶ್ನೆ ಪ್ರತಿಷ್ಠೆ ಪಣವಾಗಿದ್ದ ಹೆಬ್ಬೆರಳು
ಕೊನೇ ಆಕಳು ಕಿರುಬೆರಳು ಬೆಸೆದು
ಅನಾಮಿಕದರಿವು ತೃಪ್ತಾತ್ಮಗಳ ಮದ್ಯದಲ್ಲಿ

ಒಂದು ಸುಂದರ ಶ್ರಾವಣ ಸಂಜೆ
ನನ್ನದಾಗಲಿ ..ನಿನ್ನದಾಗಲಿ
ತನುಮನದ ಬೆಸುಗೆ ಮಳೆಗೆ
ಹೊಸಭಾವ ಬೆಳೆ ತೆನೆಯಾಗಲಿ .

                                             ಚಿತ್ರಕೃಪೆ : ಗೂಗಲ್ ಇಮೇಜಸ್ 

2 comments:

  1. ರಸಮಯ ಕಾವ್ಯ ಕರೆ.
    ಮನಸ್ಸಿಗೆ ಮುದ ನೀಡುವ ಸುಲಲಿತ ಭಾಷಾ ಪ್ರಯೋಗ.

    ReplyDelete
    Replies
    1. ಧನ್ಯವಾದಗಳು ಸಾರ್ :)

      Delete