Sunday 12 May 2013

" ಅಮ್ಮಾ..... "


ಮುಷ್ಠಿ ಬಿಡಿಸಲಾಗದ ಕೂಸು ಕಾಲವದು
ಸಮಷ್ಠಿಗೆ ಬೆರಗುಗಣ್ಣು ಬಿಟ್ಟ ವಯಸದು
ಕಂಡದ್ದೆಲ್ಲ ಪಡೆಯಲು ತೆವಳಿದ ನಡಿಗೆಯದು

ನಿದ್ದೆಯಿಂದೆದ್ದಾಗಲೆಲ್ಲಾ ...ಎದೆಗವಚಿ
ಕಂದಾ ಎಂದು ಕನವರಿಸದಿದ್ದರೆ  
ಕಳ್ಳ ಬೆಕ್ಕು ಪುಟ್ಟ ರೊಟ್ಟಿ ಕದ್ದೊಡಿದರೆ 
ಗುಬ್ಬಿ ಕೈಗೆ ಸಿಗದೆ ರೊಯ್ಯನೆ ಹಾರಿದರೆ
ನೆರವಾಗಿ ಬರುವ  ಸ್ವರ  " ಅಳು " ವೊಂದೇ 

ಬೇಕು ಬೇಡದ ಭಾಷೆ ಒಂದೇ ಅಳುವಲ್ಲಿ
ಹಲವು ಭಾವಾರ್ಥ ಕಂಡುಕೊಂಡವಳು
ಅಮೃತ ಉಣಿಸಿ ಹಸಿವ ನಂದಿಸಿದವಳು
ಪ್ರೀತಿ ತುತ್ತಿಕ್ಕಿ  ಮಮತೆ ಮುತ್ತಿಕ್ಕಿದವಳು
ಮಡಿಲ ನೀಡಿ ಮುದ್ದು ಮಾಡಿ ಮಾತೆಯಾದಳು


" ಅಮ್ಮಾ " ಎರಡಕ್ಷರ ಕೋಟಿ ಬಾರಿ ಕರೆದರೂ
"ವರ್ಷಕ್ಕೆ"  ದಿನವೊಂದು ಮುಡಿಪಾಗಿಟ್ಟರೂ
"ಜನುಮ" ಹಲವು ಮತ್ತೆ ಮತ್ತೆ ಬಂದರೂ
ತೀರದು ಪ್ರತಿ ಜನುಮಕು ಪ್ರೀತಿ ವರವಾದ
ಪೊರೆವ ಪರಿಯಾದ ಜನುಮಧಾತೆಯ "ಋಣವು"

                                                                                ಚಿತ್ರಗಳು - ಕೃಪೆ : ಗೂಗಲ್ ಇಮೇಜಸ್ 

3 comments: